ಅನೂಹ್ಯ...
ಅನೂಹ್ಯನಿವನು ಮನಸ್ಸಿನ ಹಿಡಿತಕ್ಕೆ ಬಾರದವನು
ಕಣ್ಣಲ್ಲಿ ಎಂದೋ ಮಾಸಿದ ಆಸೆಗಳ ಮಬ್ಬು
ಮಾತಿನಲ್ಲಿ ಏನೋ ತಳವಳ, ಹೇಳಲಾಗದ ಗುಟ್ಟು
ಅನೂಹ್ಯನಿವನು ಊಹೆಗೆ ಸಿಲುಕದಿಹನು
ಊಹಾ ಪೋಹಗಳ ನೆಲವ ಬಿಟ್ಟು ಆಕಾಶಕ್ಕೆ ಏರಿದವನು
ಅನೂಹ್ಯನಿವನು ಇಲ್ಲಿಗೆ ಸುಮ್ಮನೆ ಬಂದವನು
ಮಾತು ಮರೆಸಿ ಮನಸ್ಸನ್ನು ಅಡಗಿಸಿ ಇಟ್ತವನು
ಅನೂಹ್ಯನಿವನು ನಿಂತಲ್ಲೇ ನಿಲ್ಲದವನು
ಹರಿಯುವ ನೀರು, ಓಡುವ ಜಿಂಕೆ ತಂಗಾಳಿಯಾದವನು
ಅನೂಹ್ಯನಿವನು ಹತ್ತಿರವಿದ್ದೂ ದೂರವಾದವನು
ಮನಸ್ಸನ್ನು ಕಲಕಿ ನಿಶ್ಚಲದೆ ನಿಂತವನು
(An attempt at poetry in my Mother tounge. Forgive the mistakes. And hoping somebody can translate this :-) And for those who didn't get it, Anoohya = Enigmatic)